ಸಾವಿಷ್ಕಾರ್-2026: 'ಮೈಸೂರು ಎಕ್ಸ್ಪ್ರೆಸ್' ತಂಡದಿಂದ ಕುಂದಾಪುರದಲ್ಲಿ ಸಂಗೀತದ ಮಳೆ!

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
: ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಆಯೋಜಿಸಿರುವ ರಾಷ್ಟ್ರಮಟ್ಟದ ಅಂತರ್ಕಾಲೇಜು ಸಾಂಸ್ಕೃತಿಕ ಹಬ್ಬ ಸಾವಿಷ್ಕಾರ್ 2026' ಕಾರ್ಯಕ್ರಮದ ಮೊದಲ ದಿನದ ಪ್ರಮುಖ ಆಕರ್ಷಣೆಯಾಗಿ ಖ್ಯಾತ 'ಮೈಸೂರು ಎಕ್ಸ್ಪ್ರೆಸ್' (Mysore Xpress) ಬ್ಯಾಂಡ್ ತಂಡದಿಂದ ಭರ್ಜರಿ ಸಂಗೀತ ಕಚೇರಿ ನಡೆಯಿತು. 

ಕಾಲೇಜು ಆವರಣವು ಸಂಗೀತ ಪ್ರೇಮಿಗಳಿಂದ ತುಂಬಿ ತುಳುಕುತ್ತಿತ್ತು. ಮೈಸೂರು ಎಕ್ಸ್ಪ್ರೆಸ್ ತಂಡದ ವಿಶಿಷ್ಟ ಶೈಲಿಯ ಗಾಯನ ಮತ್ತು ಪ್ರದರ್ಶನಕ್ಕೆ ಯುವಜನತೆ ಮನಸೋತರು. ತಾಂತ್ರಿಕ ಮತ್ತು ಕ್ರೀಡಾ ಸ್ಪರ್ಧೆಗಳ ನಡುವೆ ನಡೆದ ಈ ಸಂಗೀತ ಕಾರ್ಯಕ್ರಮವು ಹಬ್ಬಕ್ಕೆ ಹೊಸ ಕಳೆ ತಂದಿತು.

ಸಾವಿಷ್ಕಾರ್ ಹಬ್ಬದ ಮೊದಲ ದಿನವೇ ಇಂತಹ ಅದ್ಭುತ ಪ್ರದರ್ಶನ ನೀಡುವ ಮೂಲಕ ಮೈಸೂರು ಎಕ್ಸ್ಪ್ರೆಸ್ ತಂಡವು ನೆರೆದಿದ್ದವರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.